Posts

Showing posts from July, 2020

ಒಂದಷ್ಟು ನೆನಪುಗಳು

Image
ಶಿಶುವಿನಡೆಗೆ ಶಿಕ್ಷಕ ಕಾರ್ಯಕ್ರಮ ದ ಒಂದಿಷ್ಟು ನೆನಪುಗಳು

ನನ್ನ ಹುಟ್ಟುಹಬ್ಬ...🍰🎂🍧🍨🍦🍡🍥

Image
ನನ್ನ ಹುಟ್ಟಿದ ದಿನವನ್ನು ಆಚರಿಸಲು ತವಕದಿಂದ ಕಾಯುತ್ತಿರುತ್ತಾರೆ " ನನ್ನ ಶಾಲೆಯ ,ನನ್ನ ಮಕ್ಕಳು".. ತಮ್ಮ ಕಲೆ, ಸೃಜನಶೀಲತೆಯನ್ನು ಎರಕ ಹೊಯ್ದು ನನಗೊಂದು ಮುದ್ದಾದ ಉಡುಗೊರೆ ನೀಡುತ್ತಾರೆ ಪುಟಾಣಿಗಳು..  ಅವರ ಪ್ರೀತಿ ನನ್ನ ಗಂಟಲ ನರ ಉಬ್ಬಿಸುತ್ತದೆ.. ಕಣ್ಣಲ್ಲಿ ಆನಂದ ಭಾಷ್ಪ....... ಅವರ ಪ್ರೀತಿಗೆ ಋಣಿಯಾದ ನಾನು,ಅವರಿಗಾಗಿ ಮತ್ತಿನೇನಾದರೂ ಮಾಡಬಲ್ಲೆನೆ? ಎಂಬ ಕಾತರ ಹುಟ್ಟಿಸುತ್ತಾರೆ..... ಪ್ರತೀ ವರ್ಷ.... ಧನ್ಯವಾದಗಳು ಮಕ್ಕಳೇ...... 🌺💐🌸💮🏵🌹🌺🌻🌼🌷🌺💐🌸💮🏵🌹🌺 ಮಕ್ಕಳೊಂದಿಗೆ ಕಳೆದ ಪ್ರತಿ ಕ್ಷಣವೂ ಅಮೃತ ಘಳಿಗೆ. ಕರೋನಾ ಪಿಡುಗು ಬೇಗ ಹೋಗಿ ಮತ್ತೆ ಬೇಗ ಶಾಲೆ ಶುರುವಾಗಲಿ ಎಂಬ ಸದಾಶಯ. ವಂದನೆಗಳು. 🙏🙏

🌷🌷ಶಿಶುವಿನೆಡೆಗೆ ಶಿಕ್ಷಕ.- ಒಂದು ವಿನೂತನ ಪ್ರಯೋಗ.🌺🌺🌷

Image
 ನಮಸ್ಕಾರಗಳು. ಇಂದಿನ ಈ ಕಾಲಮಾನ ಮನುಕುಲಕ್ಕೇ ಒಂದು ಮಹತ್ತರವಾದ ಘಟ್ಟ. .ನಾವು ಊಹೆ ಕೂಡ ಮಾಡದ ಒಂದು ಪರಿಸ್ಥಿತಿಗೆ ಎದುರಾಗಿ ನಿಂತಿದ್ದೇವೆ..ಇಂತಹ ಸಂದಿಗ್ಧ ಪರಿಸ್ಥಿತಿಗಳು ನಮ್ಮನ್ನು ಇನ್ನಿಷ್ಟು ಗಟ್ಟಿಗೊಳಿಸಲು ಬಂದಿರುವ ಸವಾಲುಗಳು ಎಂದು ಧನಾತ್ಮಕ ವಾಗಿ ಯೋಚಿಸಿದರೆ ನಾವು ಧೃತಿಗೆಡದೆ ಸವಾಲುಗಳನ್ನು ಎದಿರಿಸಬಹುದು.             ಇಲ್ಲಿಯವರೆಗೂ ಮನುಕುಲವು ಇಂಥಃ ಸಂದಿಗ್ಧ ಪರಿಸ್ಥಿತಿಗಳನ್ನು ಅನೇಕ ಬಾರಿ ಎದುರಿಸಿ ಜಯಶಾಲಿಯಾಗಿದೆ.. ಹೌದು..ಆದ ಕಷ್ಟನಷ್ಟಗಳೂ ಅಪಾರ.....ಆದರೂ ಮಾನವ ಎಂದಿಗೂ ಸೋಲಲಿಲ್ಲ. ಬಂದ ಕಷ್ಟಕರ ಸನ್ನಿವೇಶಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದ್ದಾನೆ. ಇಂತಹ ಸಂದರ್ಭಗಳಲ್ಲಿ ನಮ್ಮ ಇತಿಮಿತಿಗಳು, ನಮ್ಮ ಧೈರ್ಯ , ನಮ್ಮ ಶಕ್ತಿಗಳು ಓರೆ ಹಚ್ಚಲಾಗುತ್ತವೆ. ಮಾನವೀಯತೆಯ ಅನಾವರಣವೂ ಈ ಕಾಲಘಟ್ಟದಲ್ಲೇ ಆಗುವುದು. ಅನೇಕ ಕ್ಷೇತ್ರ ಗಳು ಈ "ಕರೋನಾ" ಎಂಬ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿವೆ.ನಾನು ಪ್ರೀತಿಯಿಂದ ಆರಿಸಿಕೊಂಡ ಕ್ಷೇತ್ರ ಶಿಕ್ಷಣ ಕ್ಷೇತ್ರ.... ಕಲಿಯುವ ಆಸಕ್ತಿ ಇರುವಂತಹವರಿಗೆ ಹೇಳಿಮಾಡಿಸಿದಂತಹ ಕ್ಷೇತ್ರ..ನಮ್ಮ ಈ ಪವಿತ್ರವಾದ ಕೆಲಸದಲ್ಲಿ "ಮಕ್ಕಳೇ ನಮ್ಮ ದೇವರು.ಮಕ್ಕಳೇ ನಮ್ಮ ಅನ್ನದಾತರು"... ಆದರೆ ಶಾಲೆಗಳಲ್ಲಿ ಮಕ್ಳು ಸೇರುವ ಹಾಗಿಲ್ಲ... ಜೊತೆಗೆ ಆಟ,ಪಾಠ,ನಲಿವು,ಕಲಿವು ಯಾವುದೂ ಇಲ್ಲ.... ಮಕ್ಕಳಿಗೂ ಬೇಜಾರು..... ತಮ್ಮ ನೆಚ್ಚಿನ ಶಿಕ್ಷಕರ ಒಡನಾಟ ಇಲ್ಲ, ಅ...