🌷🌷ಶಿಶುವಿನೆಡೆಗೆ ಶಿಕ್ಷಕ.- ಒಂದು ವಿನೂತನ ಪ್ರಯೋಗ.🌺🌺🌷
ನಮಸ್ಕಾರಗಳು.
ಇಂದಿನ ಈ ಕಾಲಮಾನ ಮನುಕುಲಕ್ಕೇ ಒಂದು ಮಹತ್ತರವಾದ ಘಟ್ಟ. .ನಾವು ಊಹೆ ಕೂಡ ಮಾಡದ ಒಂದು ಪರಿಸ್ಥಿತಿಗೆ ಎದುರಾಗಿ ನಿಂತಿದ್ದೇವೆ..ಇಂತಹ ಸಂದಿಗ್ಧ ಪರಿಸ್ಥಿತಿಗಳು ನಮ್ಮನ್ನು ಇನ್ನಿಷ್ಟು ಗಟ್ಟಿಗೊಳಿಸಲು ಬಂದಿರುವ ಸವಾಲುಗಳು ಎಂದು ಧನಾತ್ಮಕ ವಾಗಿ ಯೋಚಿಸಿದರೆ ನಾವು ಧೃತಿಗೆಡದೆ ಸವಾಲುಗಳನ್ನು ಎದಿರಿಸಬಹುದು.
ಇಲ್ಲಿಯವರೆಗೂ ಮನುಕುಲವು ಇಂಥಃ ಸಂದಿಗ್ಧ ಪರಿಸ್ಥಿತಿಗಳನ್ನು ಅನೇಕ ಬಾರಿ ಎದುರಿಸಿ ಜಯಶಾಲಿಯಾಗಿದೆ.. ಹೌದು..ಆದ ಕಷ್ಟನಷ್ಟಗಳೂ ಅಪಾರ.....ಆದರೂ ಮಾನವ ಎಂದಿಗೂ ಸೋಲಲಿಲ್ಲ. ಬಂದ ಕಷ್ಟಕರ ಸನ್ನಿವೇಶಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದ್ದಾನೆ.
ಇಂತಹ ಸಂದರ್ಭಗಳಲ್ಲಿ ನಮ್ಮ ಇತಿಮಿತಿಗಳು, ನಮ್ಮ ಧೈರ್ಯ , ನಮ್ಮ ಶಕ್ತಿಗಳು ಓರೆ ಹಚ್ಚಲಾಗುತ್ತವೆ. ಮಾನವೀಯತೆಯ ಅನಾವರಣವೂ ಈ ಕಾಲಘಟ್ಟದಲ್ಲೇ ಆಗುವುದು.
ಅನೇಕ ಕ್ಷೇತ್ರ ಗಳು ಈ "ಕರೋನಾ" ಎಂಬ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿವೆ.ನಾನು ಪ್ರೀತಿಯಿಂದ ಆರಿಸಿಕೊಂಡ ಕ್ಷೇತ್ರ ಶಿಕ್ಷಣ ಕ್ಷೇತ್ರ.... ಕಲಿಯುವ ಆಸಕ್ತಿ ಇರುವಂತಹವರಿಗೆ ಹೇಳಿಮಾಡಿಸಿದಂತಹ ಕ್ಷೇತ್ರ..ನಮ್ಮ ಈ ಪವಿತ್ರವಾದ ಕೆಲಸದಲ್ಲಿ "ಮಕ್ಕಳೇ ನಮ್ಮ ದೇವರು.ಮಕ್ಕಳೇ ನಮ್ಮ ಅನ್ನದಾತರು"... ಆದರೆ ಶಾಲೆಗಳಲ್ಲಿ ಮಕ್ಳು ಸೇರುವ ಹಾಗಿಲ್ಲ... ಜೊತೆಗೆ ಆಟ,ಪಾಠ,ನಲಿವು,ಕಲಿವು ಯಾವುದೂ ಇಲ್ಲ....
ಮಕ್ಕಳಿಗೂ ಬೇಜಾರು..... ತಮ್ಮ ನೆಚ್ಚಿನ ಶಿಕ್ಷಕರ ಒಡನಾಟ ಇಲ್ಲ, ಅವರ ಪ್ರೋತ್ಸಾಹ ಇಲ್ಲ, ಪ್ರೀತಿಯ ಗದರುವಿಕೆ ಇಲ್ಲ... ಹೊಸ ಹೊಸ ವಿಷಯಗಳಿಲ್ಲ...ನಾಳೆಯ ಕುತೂಹಲ ಇಲ್ಲ......
ತಂತ್ರಜ್ಞಾನ ಆಧಾರಿತ ಕಲಿಕೆಗೆ ಅವಕಾಶ ಇದ್ದರೂ.. ಅನೇಕ ಸೌಲಭ್ಯ ವಂಚಿತ ಮಕ್ಕಳಿಗೆ ಅನಾನುಕೂಲ ಆಗಬಾರದು ಎಂಬ ಉದಾರ ವಿಚಾರದಿಂದ..ನಮ್ಮ ಇಲಾಖೆ ಕೈಗೆತ್ತಿಕೊಂಡ ಯೋಜನೆ " ಶಿಶುವಿನಡೆಗೆ ಶಿಕ್ಷಕ" .. ಶಾಲೆಇಂದ ಹೊರಗೆ... ಮಕ್ಕಳ ಮನೆ ಅಂಗಳದಲ್ಲಿ.. ಮಕ್ಕಳಿಗಾಗಿ ಮಾಡಿದ ಯೋಜನೆ.
ಆಸಕ್ತ ಶಿಕ್ಷಕರು ಶಾಲೆಗಳಿರುವ ಗ್ರಾಮದಲ್ಲಿ ವಠಾರ,ಅರಳಿಕಟ್ಟೆ,ಮಂದಿರಗಳ ಅಂಗಳದಲ್ಲಿ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವಂತಃ ಚಟುವಟಿಕೆಗಳಿಂದ ಕಲಿಕಾಪ್ರಕ್ರಿಯೆ ಅಲ್ಲಿ ತೊಡಗಿರುವಂತೆ ನೋಡಿಕೊಳ್ಳುವುದು.
ಇಂಥಃ ಉದ್ದೇಶ ವನ್ನು ನೆರವೇರಿಸಲು ಒಪ್ಪಿಕೊಂಡಿದ್ದು ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮೂವರು ಸಹ ಶಿಕ್ಷಕರು... ನಮ್ಮ ಶಾಲೆ .ಸ.ಹಿ.ಪ್ರಾ.ಶಾಲೆ ಚಂದನವಾಡಿ.
ಉತ್ಸಾಹಭರಿತ ಮು.ಗು. ಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯುತ್ತಿದೆ.
ಗಣಿತದ ಮೂಲ ಕ್ರಿಯೆಗಳು.ಮಗ್ಗಿ,.ಸರಳ ಗಣಿತ,ಗಣಿತದ ಮೋಜು, ಪರಿಸರ ವಿಜ್ಞಾನ,ಸುತ್ತಲಿನ ಸಣ್ಣಪುಟ್ಟ ವಿಷಯಗಳು, ಮೋಜು, English word meaning,synonym ,antonyms, verb forms, tenses,simple sentence making ,ಕನ್ನಡ ,ಇತಿಹಾಸ, ಚಿತ್ರಕಲೆ,ರಸಪ್ರಶ್ನೆ , ಮುಂತಾದ ಅನೇಕ ಚಟುವಟಿಕೆಗಳು ನಿರಾತಂಕವಾಗಿ ನಡೆಯಿತ್ತಿವೆ.
ಮುಖ್ಯವಾಗಿ ಮಕ್ಕಳು ತಂತ್ರಜ್ಞಾನ ಕಲಿಕೆಯತ್ತಲೂ ಗಮನ ವಹಿಸುತ್ತಿದ್ದಾರೆ. WhatsApp ನಲ್ಲಿ ಹಾಕಿರುವ ಪ್ರಶ್ನೆಗಳಿಗೆ ಅದರಲ್ಲೇ ಉತ್ತರ ನೀಡುತಿದ್ದಾರೆ...
ಅನೇಕ ಸಂಕಷ್ಟಗಳ ನಡುವೆಯೂ ಕಲಿಕೆಯನ್ನು ಬಿಡುವುದಿಲ್ಲ ಎನ್ನುವ ಛಲವಂತ ಮಕ್ಕಳು ನನ್ನ ಶಾಲೆಯ ಮಕ್ಕಳು...
ಈ ಸುಂದರ ಕಾರ್ಯಕ್ರಮದ ಕೆಲವು ಸುಂದರ ನೆನಪುಗಳು.
👀
,🌺🏵ಪ್ರಾರ್ಥನೆಯೊಂದಿಗೆ 🏵🌺
💪💪ಶಾರೀರಿಕ ಸಧೃಡತೆಗೆ ವ್ಯಾಯಾಮ 💪💪
🐥🐥ಕೊಟ್ಟ ಕೆಲಸ ಮಾಡುತ್ತಿರುವುದು.ಶಿಕ್ಷಕರ 🐤🐤
ಮಾಡಿರುವ ಕೆಲಸಕ್ಕೆ ಇಲಾಖೆಯಿಂದ ಪ್ರೋತ್ಸಾಹ ಸಿಕ್ಕಾಗ ಮಾಡುವ ಉತ್ಸಾಹ ಇಮ್ಮಡಿ ಆಗುವುದು.
🌷🏵💐🌸🌼💐🏵💮🌼🌻🌺🍁🌹🌷🌼🌻🌺
ಶಿಶುವಿನ ಡೆಗೆ ಶಿಕ್ಷಕ ಕಾರ್ಯಕ್ರಮ ದ ಒಂದು ಕಿರು ನೋಟ.
ವಂದನೆಗಳು.







Wow akka supwrb...
ReplyDeleteThanks dear
Delete